December 12, 2019

ಮುಸಾಫಿರ್ ಪದ್ಯಗಳು – 1

1. ಸದಾ ಅಕ್ಕರೆಯ ಬೆನ್ನು ತಟ್ಟಿಸಿಕೊಳ್ಳಲು ಬಂದು, ನನ್ನ ರಾತ್ರಿಗಳನ್ನು ಕಬಳಿಸುವ ಅಸಹಾಯಕಳೇ ಕೇಳು, ನನಗೆ ಹಗಲುಗಳಲ್ಲೂ ಒಂಟಿತನದ ಕೆಲಸವೇ ಇದೆ. 2. ಒಂದಿಷ್ಟು ಸಕ್ಕರೆಯ ಉಗುಳಿದರೆ ಅನಾಮತ್ತು ಎರಡು ಹೊತ್ತಿನ ಕಾಫಿಗಾದರೂ ಆಗುತ್ತಿತ್ತು …

Read More

ಫಲ್ಗುಣಿಯ ಹನಿಗಳು -1

ಬಾಳೆಗಿಡದ ದಾರದಲ್ಲಿ ಬಾಲ ಸಿಕ್ಕಿಸಿ ಆತ್ಮಹತ್ಯೆ ಮಾಡಿಕೊಂಡ ಮುಗ್ಧ ಮಲ್ಲಿಗೆಯ ಮೊಗ್ಗುಗಳು ನಿನ್ನ ಮುಡಿಯಲ್ಲಿ ಮತ್ತೆ ಜೀವ ಪಡೆದುಕೊಂಡಿವೆ. ~~~ ಊರ ಜಾತ್ರೆಗೆ ತಳಿರು ತೋರಣ ಮಿಣುಕು ದೀಪವೆಲ್ಲ ಕಟ್ಟಿದಾಕ್ಷಣ ಮುಗಿದಿಲ್ಲ. ಸಂಭ್ರಮ ಕಳೆಗಟ್ಟುವುದು …

Read More

ಅವಳು …

೧.ಬಹುಮಹಡಿ ಮನೆಯಲ್ಲಿಕಾಲಿಗೊಂದು ಕಾಲಾಳು,ಕೋಣೆಗೊಂದು ಸೀಸಿ ಕ್ಯಾಮರಾಅವಳು ಬಿಕ್ಕುವುದು ಮಾತ್ರಗೋಡೆಗಷ್ಟೇ ತಿಳಿಯುತ್ತದೆ. ೨.ಸೂರ್ಯ ಸರಿದರೂ ಮನೆ ಮುಟ್ಟದಮಗಳು;ಜಾಗರಣದ ಜಗತ್ತಿನಲ್ಲಿ ಅವಳಿಗೆಸೂರ್ಯನ ಮೇಲೆ ಮುನಿಸು. ೩.ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;ಉಸಿರು ನಿಲ್ಲಿಸಿತೊಟ್ಟಿಲಿನ ಉಸಿರನ್ನು ಆಲಿಸಿನಿಟ್ಟುಸಿರಿಟ್ಟಳು ಅವಳು …

Read More

ಆಂತರ್ಯದ ಹನಿಗಳು [ಹುಸೇನಿ ಪದ್ಯಗಳು – 42]

ಇಲ್ಲಿ ಎಲ್ಲವೂ ಸಹಜ, ಇಳಿಸಂಜೆಯಲ್ಲಿ ಮಣಗುಡುವ ನಿನ್ನ ನೆನಪುಗಳನು ಬಿಟ್ಟು.. ~ ಒಂದಿಷ್ಟು ಪ್ರೀತಿ ಬೀಜಗಳಿವೆ ನಿನ್ನ ಮನದ ಮಣ್ಣ ಹದ ಮಾಡಿಕೋ; ~ ಎಲ್ಲಾದಕ್ಕೂ ಕಾರಣ ಹೇಳಲಾಗದು; ವಸಂತ ಕಾಲದಲ್ಲಿ ಭೂಮಿ ಮರುಹುಟ್ಟು …

Read More

ಹುಸೇನಿ ಪದ್ಯಗಳು – 39

೧) ಕಂಪ್ಪೌಂಡಾವೃತ ಬಹುಮಡಿಯ ಮನೆಯ ಅಲ್ಸೇಶನ್ ನಾಯಿಗೂ.. ಸಿಕ್ಕಿದ್ದನ್ನೆಲ್ಲ ತಿಂದು ರಾತ್ರಿಯೆಲ್ಲಾ ಊಳಿಡುವ ಬೀದಿನಾಯಿಗೂ ಇರುವ ವ್ಯತ್ಯಾಸ ಬರಿಯ ‘ಸ್ವಾತಂತ್ರ್ಯ’ ೨) ಸಮಯದ ವೇಗಕ್ಕೆ ಕುಪಿತನಾದವನು ಗಡಿಯಾರವನ್ನು ಹೊಡೆದು ಹಾಕಿದ; ಆದರೂ ಸಮಯ ನಿಲ್ಲಲಿಲ್ಲ …

Read More

ಹುಸೇನಿ ಪದ್ಯಗಳು – 37

ಅಬ್ಬರದ ಭಾಷಣದಿಂದ ದೇಶದ ದಿಶೆ ಬದಲಿಸಬಹುದು ಹಸಿವಿಗೆ ಅನ್ನವೇ ಬೇಕು .. — ಅವನು ಮಸೀದಿಯೊಳಗೆ, ಇವನು ಮಂದಿರದೊಳಗೆ, ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ ಬೇಡುತ್ತಲೇ ಇದ್ದರು.. —  ಮಗ ಬೈಕಿನ ಮೊದಲನೇ ರೈಡಿಗೆ …

Read More

ಸಂಜೆ ಕಳೆದು ಕತ್ತಲಾಗುತ್ತಿದೆ …

ಮತ್ತೆ ಕತ್ತಲಾಗಿದೆ.. ನೆನಹುಗಳು ಬೆತ್ತಲಾಗಬಹುದು… ಹೌದು .. ಪಡುವಣ ಅಂಬರ ಹೊಂಬಣ್ಣವನ್ನು ಪಡೆದು ಜಗಮಗಿಸುತ್ತಿದೆ. ಇನ್ನೇನು ಕತ್ತಲಾಗುವ ಹೊತ್ತು.. ನೆರಳೂ ಜೊತೆಯಿರದ ಕತ್ತಲು! ನಿನಗಿನ್ನೂ ನೆನಪಿರಬಹುದು.. “ನಾನಿನ್ನ ನೆರಳು ಕಣೋ.. ” ಎಂದು ಪೆಚ್ಚಾಗಿ …

Read More