January 23, 2020

ಕಾಯುತ್ತಿದ್ದೇನೆ ..

ಮೌನವೆಂಬ ಸಾಗರದ ಅಂಚಲಿ ನಿಂತು ನಾನು ಹೇಳದೆ ಹೇಳಿದ್ದು ಪ್ರೀತಿಯ ಕುರಿತಾಗಿತ್ತು ಹಗಲು ಕನಸಿನ ಬೆನ್ನೇರಿ ಸಾಗುವ ವೇಳೆ ನೀನು ಕೇಳದೆ ಹೋದದ್ದೂ ಅದೇ… ಆದರೂ ಕಾಯುತ್ತಿದ್ದೇನೆ .. ನೀನು ನನ್ನನ್ನು ಅರಿಯುವ ಕಾಲಕ್ಕಾಗಿ…

Read More

ಹುಸೇನಿ ಪದ್ಯಗಳು – 5

ಆ ನಿನ್ನ ಬಿಚ್ಚು ನಗುವಿನ ಹಿಂದೆ ಅದೆಷ್ಟು ಬತ್ತದ ಕಣ್ಣೀರು! ———- ಚದುರಿದ ಕನಸೊಂದಿಗೆ ಜೀವಿಸುವುದಕ್ಕಿಂತ ಒಳಿತು ಮರೆಯದ ನೆನಪುಗಳೊಂದಿಗೆ ಸಾಯುವುದು ಅಲ್ಲವೇ ? ——– ದೂರದಲ್ಲೆಲ್ಲೋ ಕಂಡ ಬೆಳಕನ್ನು ನೀನು ಬೆಂಬತ್ತಿದಾಗ ನನ್ನೊಳಗೆ …

Read More

ಕಣ್ಣೀರನ್ನು ಪ್ರೀತಿಸುತ್ತಿದೆ..

ಅಂದು ನೀ ನನ್ನ ಬಳಿಯಿರಲು ಮಂದಹಾಸವನ್ನು ಪ್ರೀತಿಸುತ್ತಿದ್ದ ನನ್ನ ಅಕ್ಷರಗಳು ಇಂದು ನೀನು ಅಗಲಿರಲು ಕಣ್ಣೀರನ್ನು ಮಾತ್ರ ಪ್ರೀತಿಸುತ್ತಿದೆ…

Read More

ನಿನ್ನ ಹೆಸರು..

ಮಂಜು ಆವರಿಸಿದ ಗಾಜಿನ ಮೇಲೆ ಹಾಗೆ ಸುಮ್ಮನೆ ಒಂದು ಹೆಸರ ಬರೆದೆ.. ಆಮೇಲೆ ಸುರಿದ ಮಳೆಗೋ,ಬೀಸಿದ ಗಾಳಿಗೋ, ಸುಡು ಬಿಸಿಲಿಗೋ ಆ ಹೆಸರನ್ನ ಮಾಯಿಸಲು ಸಾಧ್ಯವಾಗಿಲ್ಲ.! ಕಾಲಕ್ಕೂ ಮಾಯಿಸಲು ಸಾಧ್ಯವಾಗದೆ ನಾನು ನಿನ್ನ ಹೆಸರು …

Read More