December 9, 2019

ನೀನು..

ಕಡಲ ತಡಿ ನೀನು, ಭೋರ್ಗರೆದು ಮೊರೆದು, ಸಿಡಿದು, ಹಾಲ್ನೊರೆಗೆರೆದು, ನಿನ್ನ ಭೇಟಿಯಲ್ಲಿ ಶಾಂತ – ಅಲೆ ನಾನು..! ಧರಿತ್ರಿ ನೀನು.. ನೀಲ ನಭದಿ ಕಪ್ಪಿಟ್ಟು ಹಾರಿ ಹರಡಿ, ಗುಡುಗು ಸಿಡಿಲಿಗೆ ಚದುರಿ ಹನಿಯಾಗಿ ನಿನ್ನೊಳಗೆ …

Read More

ಒಬ್ಬಂಟಿಯಾದುದು..

ನಿನ್ನ ಕಣ್ಣಂಚಿನ ದೇದೀಪ್ಯಮಾನ ಬೆಳಕಿನಿಂದ ನನ್ನೀ ಹೃದಯ ಚಲಿಸುತ್ತಿದ್ದರಿಂದೇನೋ ನೀ ಅಗಲಿದಾಗ ಏಕಾಂತತೆಯ ಕಾರಿರುಳಲ್ಲಿ ನಾನು ಒಬ್ಬಂಟಿಯಾದುದು.. ಹೇಗಿದೆ ಹೇಳಿ

Read More

ಕಣ್ಣಲ್ಲೇ ಇರುವೆ…!

ಇಂದು ನೀ ನನ್ನ ಅಗಲಿ ಹೋದರೂ.. ನಿನ್ನ ನೆನಪುಗಳಿಂದ ಮಾಸಿ ಹೋದರೂ.. ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ ಹುಡುಕದಿರು ನೀನನ್ನ.. ಮತ್ತೆಲ್ಲಿಯೂ.. ನಾನಿನ್ನ ಕಣ್ಣಲ್ಲೇ ಇರುವೆ; ಒಂದು ಹನಿ ಕಣ್ಣೀರಾಗಿ…! ಹೇಗಿದೆ ಹೇಳಿ

Read More

ನೀನೆಂದರೆ..

ನೀನೆಂದರೆ.. ಕಾದು ಕಾವಲಿಯಾದ ಮನಸಿಗೆ ಹೊಂಗೆ ತಂಪು ಇರುಳ ಕರಾಳತೆಯಲ್ಲಿ ಕಳೆದು ಹೋಗುವ ಕನಸು..! ನೀನೆಂದರೆ.. ಕಲ್ಪನೆ, ಪರಿಕಲ್ಪನೆ ಬದಲಾವಣೆ! ನಾಳೆಯ ನಿರೀಕ್ಷೆ, ಪ್ರತೀಕ್ಷೆ ! ನೀನೆಂದರೆ.. ಮುಂಗುರುಳು ಮುಂಜಾನೆಯ ಮಂಜ ಹನಿ, ಕೇಳಿದಷ್ಟೂ …

Read More

ಹುಸೇನಿ ಪದ್ಯಗಳು – 12

೧. ನನ್ನ ನಿನ್ನ ನಂಟು ಬಿಲ್ಲು-ಬಾಣದಂತಂದೆ ನೀನು; ಗಮ್ಯ ಸೇರಲು ಬಾಣ ಬಿಲ್ಲನ್ನು ತೊರೆಯಲೇಬೇಕು.. ೨. ಇಲ್ಲಿರುವುದು ಬರೀ ಛಾಯೆ; ನನ್ನೊಳಗೆ ಪದವಾಗದೆ ಉಳಿದದ್ದು ಕವಿತೆ.. ೩. ನಿನ್ನೆಯೊಳಗಿನ ನೀನು ನನ್ನ ಇಂದನ್ನು ನುಂಗಿದೆ; …

Read More

ದನಿಯಾಗದ ಹನಿಗಳು(ಹುಸೇನಿ ಪದ್ಯಗಳು – 11)

1. ನೀ ಕೊಟ್ಟ ನಲಿವಿಗಿಂತ ನೋವುಗಳೇ ಹೆಚ್ಚು ಅಪ್ಯಾಯಮಾನ…! — 2. ಪರ್ವತದೊಳಗೂ ಬೆಂಕಿಯಂತೆ.., ನನ್ನೊಡಲೊಳಗೆ ನಿನ್ನ ನೆನಪಂತೆ…! — 3. ನಿನಗೆ ಗೊತ್ತೇ ಗೆಳತಿ..? ನನಗೆ ಸ್ವರ್ಗದಿಂದ ಉಡುಗೊರೆಯೊಂದು ಸಿಕ್ಕಿದ್ದು, ಅದು ನೀನೆ…! …

Read More

ಹುಸೇನಿ ಪದ್ಯಗಳು – 10

೧ ಎಲ್ಲೆಲ್ಲೋ ಹುಡುಕಿದೆ ನಿನ್ನ, ನನ್ನೆದೆ ಮಿಡಿತದ ತಾಳವನ್ನರಿಯದೆ…! *** ೨ ಸಾಗರ ತಡಿಯಲ್ಲಿ ಮುತ್ತಿನ ಚಿಪ್ಪಿನೊಳ ರತ್ನದಂತೆ ನನ್ನೆದೆಯಲಿ ನಿನ್ನ ನೆನಪುಗಳು…! *** ೩ ನಿನ್ನ ನೆನಪುಗಳ ಪೋಣಿಸಿ ಬರೆದ ಕವಿತೆಯ ನೀ …

Read More

ಪ್ರೀತಿಯ ಅಗಾಧತೆ

ಎಲೆಗಳು ಪರಸ್ಪರ ತಾಕದಿರಲು ದೂರ ದೂರದಲಿ ನೆಟ್ಟ ಮರಗಳು ಭೂಗರ್ಭದಲಿ ಬೇರುಗಳೊಡನೆ ಬೆರೆತು ಮತ್ತೆ ಒಂದಾಗುವುದು….. ಪರ್ವತದ ಹಲವು ದಾರಿಯಲ್ಲಿ ಚಿಮ್ಮಿ ಬಂದ ನೀರಿನ ಒರತೆ ನೀಲಿ ಸಾಗರದ ತಡಿಯಲ್ಲಿ ಮತ್ತೆ ಒಂದಾಗುವುದು….. ಪ್ರಿಯೇ …

Read More

ಕಾಯುತ್ತಿದ್ದೇನೆ ..

ಮೌನವೆಂಬ ಸಾಗರದ ಅಂಚಲಿ ನಿಂತು ನಾನು ಹೇಳದೆ ಹೇಳಿದ್ದು ಪ್ರೀತಿಯ ಕುರಿತಾಗಿತ್ತು ಹಗಲು ಕನಸಿನ ಬೆನ್ನೇರಿ ಸಾಗುವ ವೇಳೆ ನೀನು ಕೇಳದೆ ಹೋದದ್ದೂ ಅದೇ… ಆದರೂ ಕಾಯುತ್ತಿದ್ದೇನೆ .. ನೀನು ನನ್ನನ್ನು ಅರಿಯುವ ಕಾಲಕ್ಕಾಗಿ…

Read More