April 7, 2020

ಮುಸಾಫಿರ್ ಪದ್ಯಗಳು – 2

  1. ಯಾಕಿಷ್ಟೊಂದು ಹಠ ಹುಡುಗೀ, ಒಂದೊಮ್ಮೆ ನಮ್ಮ ದಿವ್ಯ ಕನಸು ಪ್ರಸವವಾಗಲೇಬೇಕಿರುವ ಕ್ಷಣದಲ್ಲೂ ಹೀಗೆ ಹಠ ಹೂಡಿಬಿಟ್ಟರೆ ಗಂಡಸಿನ ಅಸಹಾಕತೆ ಜಗಜ್ಜಾಹೀರಾಗದೇ ? 2. ಲಾಲಿ ಹಾಡುವ ಎದೆಯ ಆಸೆಗಳು ಮಲಗಿ ನಿದ್ರಿಸಲು …

Read More

ಮುಸಾಫಿರ್ ಪದ್ಯಗಳು – 1

1. ಸದಾ ಅಕ್ಕರೆಯ ಬೆನ್ನು ತಟ್ಟಿಸಿಕೊಳ್ಳಲು ಬಂದು, ನನ್ನ ರಾತ್ರಿಗಳನ್ನು ಕಬಳಿಸುವ ಅಸಹಾಯಕಳೇ ಕೇಳು, ನನಗೆ ಹಗಲುಗಳಲ್ಲೂ ಒಂಟಿತನದ ಕೆಲಸವೇ ಇದೆ. 2. ಒಂದಿಷ್ಟು ಸಕ್ಕರೆಯ ಉಗುಳಿದರೆ ಅನಾಮತ್ತು ಎರಡು ಹೊತ್ತಿನ ಕಾಫಿಗಾದರೂ ಆಗುತ್ತಿತ್ತು …

Read More

ಫಲ್ಗುಣಿಯ ಹನಿಗಳು -1

ಬಾಳೆಗಿಡದ ದಾರದಲ್ಲಿ ಬಾಲ ಸಿಕ್ಕಿಸಿ ಆತ್ಮಹತ್ಯೆ ಮಾಡಿಕೊಂಡ ಮುಗ್ಧ ಮಲ್ಲಿಗೆಯ ಮೊಗ್ಗುಗಳು ನಿನ್ನ ಮುಡಿಯಲ್ಲಿ ಮತ್ತೆ ಜೀವ ಪಡೆದುಕೊಂಡಿವೆ. ~~~ ಊರ ಜಾತ್ರೆಗೆ ತಳಿರು ತೋರಣ ಮಿಣುಕು ದೀಪವೆಲ್ಲ ಕಟ್ಟಿದಾಕ್ಷಣ ಮುಗಿದಿಲ್ಲ. ಸಂಭ್ರಮ ಕಳೆಗಟ್ಟುವುದು …

Read More

ಅವಳು …

೧.ಬಹುಮಹಡಿ ಮನೆಯಲ್ಲಿಕಾಲಿಗೊಂದು ಕಾಲಾಳು,ಕೋಣೆಗೊಂದು ಸೀಸಿ ಕ್ಯಾಮರಾಅವಳು ಬಿಕ್ಕುವುದು ಮಾತ್ರಗೋಡೆಗಷ್ಟೇ ತಿಳಿಯುತ್ತದೆ. ೨.ಸೂರ್ಯ ಸರಿದರೂ ಮನೆ ಮುಟ್ಟದಮಗಳು;ಜಾಗರಣದ ಜಗತ್ತಿನಲ್ಲಿ ಅವಳಿಗೆಸೂರ್ಯನ ಮೇಲೆ ಮುನಿಸು. ೩.ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;ಉಸಿರು ನಿಲ್ಲಿಸಿತೊಟ್ಟಿಲಿನ ಉಸಿರನ್ನು ಆಲಿಸಿನಿಟ್ಟುಸಿರಿಟ್ಟಳು ಅವಳು …

Read More

ಹುಸೇನಿ ಪದ್ಯಗಳು – 40

ಈ ತೀರದಲೆಗಳಿಗೂ ನಿನ್ನದೇ ಖಯಾಲಿ, ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಸೋಕಿ ಮುದ್ದಿಸಿ ಮುಗುಳ್ನಗುತ್ತದೆ ..~ ಅಪ್ಪಿಬಿಡು ಒಮ್ಮೆ ಈ ಲೋಕವೇ ನನ್ನೊಳ ಮೂಡುವಂತೆ; ಪ್ರತಿ ಅಣುರೇಣು ಛಿದ್ರಗೊಂಡು ಬ್ರಹ್ಮಾಂಡ ಮರುಹುಟ್ಟು ಪಡೆವಂತೆ … …

Read More

ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ

ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ Leave a comment

Read More

ಹುಸೇನಿ ಪದ್ಯಗಳು – 39

೧) ಕಂಪ್ಪೌಂಡಾವೃತ ಬಹುಮಡಿಯ ಮನೆಯ ಅಲ್ಸೇಶನ್ ನಾಯಿಗೂ.. ಸಿಕ್ಕಿದ್ದನ್ನೆಲ್ಲ ತಿಂದು ರಾತ್ರಿಯೆಲ್ಲಾ ಊಳಿಡುವ ಬೀದಿನಾಯಿಗೂ ಇರುವ ವ್ಯತ್ಯಾಸ ಬರಿಯ ‘ಸ್ವಾತಂತ್ರ್ಯ’ ೨) ಸಮಯದ ವೇಗಕ್ಕೆ ಕುಪಿತನಾದವನು ಗಡಿಯಾರವನ್ನು ಹೊಡೆದು ಹಾಕಿದ; ಆದರೂ ಸಮಯ ನಿಲ್ಲಲಿಲ್ಲ …

Read More

ನಾನೆಂಬ ಅಹಂ

ನಾನೆಂಬ ಅಹಂ ಎಂಬ ತಲೆ ಬರಹದಲ್ಲಿ ನೆನಪಿನ ಸಂಚಿಯ ‘ನನ್ನ ಬಗ್ಗೆ’ ಎಂಬ ಪುಟವನ್ನು ಸುಮಾರು ೫ ವರ್ಷಗಳ ಮುಂಚೆ ಬ್ಲಾಗ್ ಆರಂಭಿಸಿದಾಗ ಬರೆದಿದ್ದೆ. ಅಂದಿನ ನಂಗೂ ೫ ವರ್ಷ ವಯಸ್ಸೇರಿದ ಇಂದಿನ ನಂಗೂ …

Read More

ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)

​ಹಸಿವಾಗಲು ಮಾತ್ರೆಯಿದೆ; ಕೇರಿಯ ಅನಾಥ ಹುಡುಗ ಕಾಯುತ್ತಿದ್ದಾನೆ, ಹಸಿವಾಗದಿರಲು ಔಷಧಿ ಬೇಕಂತೆ.. — ಅಲ್ಲಿ ಅವರು ಶಾಂತಿ ಸ್ಥಾಪನೆಗಾಗಿ ಯುದ್ಧ ನಿರತರಾಗಿದ್ದಾರೆ; — ಒಡೆದ ಗಾಜು ಮರು-ಜೋಡಿಸಲಾರದಂತೆ; ಮತ್ತೆ ಬದುಕು ? — ಎಲ್ಲವನ್ನೂ …

Read More