April 8, 2020

ಜಗದ ವಿ’ಚಿತ್ರಗಳು

ವಿಧಿ ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ. ಅಂದ ಹಾಗೆ ಆತ ಮಾವನ ಮನೆಗೆ …

Read More

ವೃದ್ದಾಶ್ರಮ

ಆತ ತಂದೆಯನ್ನು ವೃದ್ದಾಶ್ರಮದಲ್ಲಿ ಬಿಟ್ಟು ಕಾರಲ್ಲಿ ಹಿಂದಿರುಗುತ್ತಿದ್ದ. ಜೊತೆಗೆ ತನ್ನ ೫ ವರ್ಷದ ಮಗನೂ ಇದ್ದ. ‘ಅಪ್ಪಾ.. ಅದ್ಯಾಕಪ್ಪ ಅಜ್ಜನನ್ನು ಅಲ್ಲಿ ಬಿಟ್ಟಿದ್ಯಾ..?’ ಮಗ ಕೇಳಿದ. ಮಗೂ ಅಲ್ಲಿ ಅಜ್ಜನನ್ನು ತುಂಬಾ ಚೆನ್ನಾಗಿ ನೋಡ್ಕೋತಾರೆ. …

Read More

ಕಲಹ

ಎಂದೂ ತಮ್ಮೊಳಗೆ ನಡೆಯುತ್ತಿದ್ದ ಕಲಹದಿಂದ ಬೇಸತ್ತು ಅವರು ಡೈವೋರ್ಸ್ ಪಡೆದಿದ್ದರು. ಈಗ ಬೋರ್ಡಿಂಗ್ ಸ್ಕೂಲಲ್ಲಿ ಕಲಿಯುತ್ತಿರುವ ಮಗನ ಬೇಸಿಗೆ ರಜೆಗೆ ಯಾರ ಮನೆಯಲ್ಲಿರಬೇಕೆಂಬ ವಿಚಾರದಲ್ಲಿ ಮತ್ತೆ ಕಲಹ ನಡೆಯುತ್ತಾ ಇದೆ.

Read More

ಆತ್ಮವಿಶ್ವಾಸ

ಪ್ರಸಿದ್ದ ಚಿತ್ರಕಾರನ ಇಂಟರ್ವ್ಯೂ ನಡೆಯುತ್ತಿತ್ತು . ‘ಸಾರ್ ನೀವು ಬಿಡಿಸಿದ ಚಿತ್ರಗಲ್ಲಿ ಅತ್ತ್ಯುತ್ತಮವಾದುದು ಯಾವುದು ?’ ಆತ ಪ್ರಶ್ನಿಸಿದ. ”ನನ್ನ ಮುಂದಿನ ಚಿತ್ರ ” ಮೌನ ಮುರಿದು ಚಿತ್ರಕಾರ ಉತ್ತರಿಸಿದ.

Read More

ಭಾಗ್ಯ

ಮದುವೆಯ ಮುಂಚಿನ ದಿನ ಓಡಿ ಹೋದ ಮಗಳನ್ನು ನೆನಪಿಸಿ ಕಂಬನಿ ಮಿಡಿಯುತ್ತಿದ್ದ ತಾಯಿಗೆ, ಇಷ್ಟಪಟ್ಟವನೊಂದಿಗೆ ಬಾಳಲಾಗದ ತನ್ನ ಬಾಳು ಒಮ್ಮೆಲೇ ನೆನಪಾಗಿ ತನಗೆ ಸಿಗದ ಭಾಗ್ಯ ಮಗಳಿಗೆ ದೊರೆಯಿತೆಂದು ಮರುಕ್ಷಣದಿಂದ ಸಂತೋಷಪಟ್ಟಳು.

Read More

ಶವಪೆಟ್ಟಿಗೆ

ಆತ ಶವಪೆಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ. “ಈ ಮಳೆಗಾಲದಲ್ಲಿ ಯಾರೂ ಸತ್ತಿಲ್ಲ” ಆತ ಮಾತು ಮುಗಿಸುವಷ್ಟರಲ್ಲಿ ‘ನಮ್ಮೂರಿಗೆ ಬರುವ ಬಸ್ಸು ಸೇತುವೆ ಕೆಳಗೆ ಬಿದ್ದು ಅದರಲ್ಲಿದ್ದವ್ರೆಲ್ಲರೂ ಸತ್ತರಂತೆ ‘ ಓಡಿ ಬಂದ ಅವನ ಸಹಾಯಕ …

Read More

ನಾಗರೀಕತೆ

ಅವರಿಬ್ಬರೂ ಬೇರೆ ಬೇರೆ ದೇಶದವರು. ನಿಮ್ಮ ದೇಶದಲ್ಲಿ ಯಾವಾಗಲೂ ಬಾಂಬ್ ಸ್ಪೋಟ.. ಥೂ ನಿಮ್ಮ ದೇಶದಲ್ಲಿ ನಾಗರೀಕತೆ ಎಂಬುದೇ ಇಲ್ಲ . ನಿಮ್ಮ ದೇಶದಲ್ಲಿ ಯಾವಾಗಲೂ ಕೋಮು ಗಲಭೆ ನಿಮಗೂ ನಾಗರಿಕತೆಯಿಲ್ಲ ಅತ ಮಾತಿಗಿಳಿದ. …

Read More

ಜಂಭ

ಒಂದು ದಿನ ಸೂರ್ಯ – ಚಂದ್ರರು ಎದುರಾದರು. ಎಲ್ಲರೂ ನನ್ನ ಬೆಳದಿಂಗಳಿಗೆ ಕಾಯುತ್ತಾರೆ. ಕವಿಗಳ ಕವಿತೆಯಲ್ಲಿ ಎಲ್ಲದಕ್ಕೂ ನಾನೇ ಉಪಮೆ. ಪ್ರೇಮಿಗಳಿಗೆ ಹುಣ್ಣಿಮೆಯ ಬೆಳಕೆಂದರೆ ಹಬ್ಬ.. ಚಂದ್ರ ಸೂರ್ಯನೆದುರು ಕೊಚ್ಚಿ ಕೊಂಡಿತು. ಅವರು ಕಾಯುವುದು …

Read More

ಪರಿಶುದ್ದಿ

ಅದು ಶುಕ್ರವಾರ .ಮಸೀದಿಗೆ ಬಂದವರನ್ನೆಲ್ಲಾ ಸೆಂಟ್ ಪೂಸಿ ಒಳಗೆ ಬಿಡಲಾಗುತ್ತಿತ್ತು. ಹರಕಲು ಬಟ್ಟೆ ಹಾಕಿದ ಚಿಂದಿ ಹಾಯುವನೂ ಬಂದಿದ್ದ .ನೋಡಿದರೆ ಅಸಹ್ಯ ಎಣಿಸುವಂತ, ನೀರು ಕಾಣದ ದೇಹ.. ನಾಲ್ಕೈದು ಮಂದಿ ಸೇರಿ ಅವನನ್ನು ಹೊರಗೆ …

Read More

ಹೋರಾಟ – ಭವಿಷ್ಯ

ಆತ ಕನ್ನಡ ಹೋರಾಟಗಾರ . ಕನ್ನಡದ ರಕ್ಷಣೆಗಾಗಿ ಅದ್ಯಾವುದೋ ವೇದಿಕೆಯನ್ನೂ ಕಟ್ಟಿದ್ದ. ಆದರೆ ಮಗನನ್ನು ಮಾತ್ರ ಹೆಚ್ಚು ಫೀಸ್ ಪಡೆಯುವ ಕಾನ್ವೆಂಟ್ ಸ್ಕೂಲ್ಗೆ ಸೇರಿಸಿದ್ದ. ‘ಕನ್ನಡ ಹೋರಾಟಗಾರರಾಗಿ ನೀವು ಹೀಗೆ ಮಾಡಬಹುದೇ ? ‘ …

Read More