ಗೆಳೆಯಾ..
ಭವಿತವ್ಯದ ಕವಲಿನಲಿ ತುಂಬು ತಮವಿದೆ ಬೆಳಕಾಗಿ ಬರಿ ನಿನ್ನನ್ನಷ್ಟೇ ತುಂಬಿಕೊಂಡಿದ್ದೇನೆ ಗೆಳೆಯಾ… ನೀನೊಂದು ಕಂದೀಲು ಆವರಿಸಿದಂತೆಲ್ಲಾ ನನ್ನನ್ನು ನಾನೆ ಕಾಣುತ್ತಿದ್ದೇನೆ… #ಆತ್ಮೀಯ_ಗೆಳೆಯನಿಗೆ Leave a comment
ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…
ಭವಿತವ್ಯದ ಕವಲಿನಲಿ ತುಂಬು ತಮವಿದೆ ಬೆಳಕಾಗಿ ಬರಿ ನಿನ್ನನ್ನಷ್ಟೇ ತುಂಬಿಕೊಂಡಿದ್ದೇನೆ ಗೆಳೆಯಾ… ನೀನೊಂದು ಕಂದೀಲು ಆವರಿಸಿದಂತೆಲ್ಲಾ ನನ್ನನ್ನು ನಾನೆ ಕಾಣುತ್ತಿದ್ದೇನೆ… #ಆತ್ಮೀಯ_ಗೆಳೆಯನಿಗೆ Leave a comment
ಕಪ್ಪುಗಟ್ಟಿದ ಭಾನು, ರೆಕ್ಕೆ ಮುರಿದುಕೊಂಡ ಕಾಗೆ, ಕಂಡವರಿಗೆ ಕೈ ಚಾಚುವ ಹರಕಲು ಹುಡುಗಿ, ಸಂತೆ ಮುಗಿದ ನೀರವ ರಸ್ತೆ, ಬೊಚ್ಚು ಬಾಯಿ ಅಜ್ಜಿಯ ನಿರಿ ಚಹರೆ ಕಿಟಕಿಯಾಚೆಗೆ ಏನೂ ಹೊಸದಿಲ್ಲ… ಈಚೆಗೂ ಅಷ್ಟೇ… ನಿನ್ನ ನೆನಪುಗಳು… …
ನಿಯ್ಯತ್ತು ಸುತ್ತಿಕೊಂಡಿದೆ, ಉಸಿರಿಗೊಂದಿಷ್ಟು ಗಾಳಿ ಕೊಡಿ ~ ನಿಯ್ಯತ್ತು ಅಂದರೆ ಪಾದ ಮತ್ತು ಚಪ್ಪಲಿ; ಅಷ್ಟೂ ಸನಿಹವಿರುವ ಸಾವು.. ~ ನಿಯ್ಯತ್ತು ಎಂದರೆ ನಡೆದ ಕಾಲುದಾರಿ ನಡುವೆ ತೊಟ್ಟಿಕ್ಕಿದ ನೆತ್ತರು, ಮತ್ತದರ ಕಮಟು .. …
ನನ್ನದೆಲ್ಲವೂ ನಿನ್ನದು ಎಂದರಿತ ದಿನದಿಂದ ಕಳೆದುಕೊಳ್ಳುವ ಭಯವ ತೊರೆದಿದ್ದೇನೆ ದೊರೆಯೇ… ~ ನಾನು ಜನರಿಗೆ ಮೋಸ ಮಾಡೋದಿಲ್ಲ ಅಂತ ಹೇಳಿದ್ದ ದಿನ ಅಪರಾತ್ರಿ ಎದ್ದು ಬಿಕ್ಕಿ ಬಿಕ್ಕಿ ಅತ್ತಿದ್ದೆ ದೊರೆಯೇ… ಈ ಕಾಲವೆಲ್ಲ ನಿನಗೆ …
ಎಲ್ಲರನ್ನೂ ಅವರಿರುವಂತೆಯೇ ಒಪ್ಪಿಕೊಳ್ಳುವ ಧಾರಾಳತನ ಪಡೆದ ದಿನ ನನ್ನ ಭಾರತಕ್ಕೆ ಅಚ್ಛೇ ದಿನ! ಹುಸೇನಿ ~ Leave a comment
ಕೂಡಿಕೊಂಡ ಬಳಿಕ ಕಳಚಿಕೊಳ್ಳಲೇಬೇಕಾದ ನಿಯ್ಯತ್ತಿನ ಕವಲುಗಳ ಹಾದಿಯಲಿ ದಾರಿಯ ಬದಲು ಪಯಣವನ್ನು ನೆಚ್ಚಿಕೊಂಡ ಮುಸಾಫಿರ ನಾನು… ಹುಸೇನಿ ~
ಗಾಳಿ, ನೀರು, ಬೆಳಕು ಉಚಿತವಾಗಿರುವ ಜಗತ್ತಿನಲ್ಲಿ ಬದುಕುವುದನ್ನು ದುಸ್ತರ ಮಾಡಿಕೊಂಡ ಮನುಷ್ಯ ಇನ್ನೊಬ್ಬರಿಗೆ ಬದುಕುವ ಪಾಠವನ್ನೂ ಹೇಳಿಕೊಡುತ್ತಾನೆ.. ಹುಸೇನಿ ~ Leave a comment
ನಿನ್ನ ಕಣ್ಣಂಚಿನ ದೇದೀಪ್ಯಮಾನ ಬೆಳಕಿನಿಂದ ನನ್ನೀ ಹೃದಯ ಚಲಿಸುತ್ತಿದ್ದರಿಂದೇನೋ ನೀ ಅಗಲಿದಾಗ ಏಕಾಂತತೆಯ ಕಾರಿರುಳಲ್ಲಿ ನಾನು ಒಬ್ಬಂಟಿಯಾದುದು.. ಹೇಗಿದೆ ಹೇಳಿ
೧. ನೆನಪಿನ ಪುಟಗಳಲ್ಲಿ ಅಡರಿ ಬಿದ್ದ ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ ನಿನ್ನ ರೂಪವಿತ್ತು.. ಇಂದು ನನ್ನ ವಿರಹಕ್ಕೂ…! ೨. ದುಃಖ ಸತ್ಯಗಳು ನನ್ನ ನೋಡಿ ನಗುತಿದೆ; ದುಃಖ ಮರೆಯಲು ನಾನೂ..! ೩. ‘ಯಾಕಾಗಿ ನೀನನ್ನ …
೧. ನನ್ನ ನಿನ್ನ ನಂಟು ಬಿಲ್ಲು-ಬಾಣದಂತಂದೆ ನೀನು; ಗಮ್ಯ ಸೇರಲು ಬಾಣ ಬಿಲ್ಲನ್ನು ತೊರೆಯಲೇಬೇಕು.. ೨. ಇಲ್ಲಿರುವುದು ಬರೀ ಛಾಯೆ; ನನ್ನೊಳಗೆ ಪದವಾಗದೆ ಉಳಿದದ್ದು ಕವಿತೆ.. ೩. ನಿನ್ನೆಯೊಳಗಿನ ನೀನು ನನ್ನ ಇಂದನ್ನು ನುಂಗಿದೆ; …