March 28, 2020

ಅವಳು …

೧.ಬಹುಮಹಡಿ ಮನೆಯಲ್ಲಿಕಾಲಿಗೊಂದು ಕಾಲಾಳು,ಕೋಣೆಗೊಂದು ಸೀಸಿ ಕ್ಯಾಮರಾಅವಳು ಬಿಕ್ಕುವುದು ಮಾತ್ರಗೋಡೆಗಷ್ಟೇ ತಿಳಿಯುತ್ತದೆ. ೨.ಸೂರ್ಯ ಸರಿದರೂ ಮನೆ ಮುಟ್ಟದಮಗಳು;ಜಾಗರಣದ ಜಗತ್ತಿನಲ್ಲಿ ಅವಳಿಗೆಸೂರ್ಯನ ಮೇಲೆ ಮುನಿಸು. ೩.ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;ಉಸಿರು ನಿಲ್ಲಿಸಿತೊಟ್ಟಿಲಿನ ಉಸಿರನ್ನು ಆಲಿಸಿನಿಟ್ಟುಸಿರಿಟ್ಟಳು ಅವಳು …

Read More

ಅಪೂರ್ಣ ಸಾಲುಗಳು .. 1

ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ …ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ …

Read More

ಸಂತ

ನೀರು ಕಾಣದ ನರಪೇತಲ ಶರೀರ, ಮುಗುಳ್ನಕ್ಕು ಶತಮಾನಗಳು ಕಳೆದಿರಬಹುದು, ಸೂರ್ಯೋದಯಕ್ಕಿಂತಲೇ ಮುಂಚೆ ಅವನು ಖಾಲಿ ತೂತು ಜೋಳಿಗೆಯೇರಿಸಿ ಹೊರಡುತ್ತಾನೆ.. ಜಗತ್ತಿನ ಪಾಲಿಗವನು ಆಯ್ದು ತಿನ್ನುವ ಕೊಳಕ; ನನ್ನ ಪಾಲಿಗೆ ಅಪರಿಚಿತ ಸಂತ… ೨) ಅಲ್ಲಿ …

Read More

ಆಂತರ್ಯದ ಹನಿಗಳು [ಹುಸೇನಿ ಪದ್ಯಗಳು – 42]

ಇಲ್ಲಿ ಎಲ್ಲವೂ ಸಹಜ, ಇಳಿಸಂಜೆಯಲ್ಲಿ ಮಣಗುಡುವ ನಿನ್ನ ನೆನಪುಗಳನು ಬಿಟ್ಟು.. ~ ಒಂದಿಷ್ಟು ಪ್ರೀತಿ ಬೀಜಗಳಿವೆ ನಿನ್ನ ಮನದ ಮಣ್ಣ ಹದ ಮಾಡಿಕೋ; ~ ಎಲ್ಲಾದಕ್ಕೂ ಕಾರಣ ಹೇಳಲಾಗದು; ವಸಂತ ಕಾಲದಲ್ಲಿ ಭೂಮಿ ಮರುಹುಟ್ಟು …

Read More

ಹುಸೇನಿ ಪದ್ಯಗಳು – 41

ತನ್ನ ಅಪ್ಪನನ್ನು ಬಲಿತೆಗೆದುಕೊಂಡ ಯುದ್ಧದ ವಿಜಯಗಾಥೆಯ ಪರೀಕ್ಷೆಯಲ್ಲಿ ಮಗ ವಿವರಿಸುತ್ತಿದ್ದಾನೆ; ಕೆಂಪಡರಿದ ಹಾಳೆ ಮೇಲೆ ಪೆನ್ನು ರಕ್ತವನ್ನು ಕಾರಿದೆ.. ~ ಅಮೃತ ಶಿಲೆಗಳ ತುಂಬಾ ಉಳಿ ಕೈಗಳ ರಕ್ತವಾರ್ಜಿಸಿ ಕೆತ್ತಿದವನ ರಕುತ ಅಡರಿ ಹಿಂಗಿದೆ; …

Read More

ಹುಸೇನಿ ಪದ್ಯಗಳು – 40

ಈ ತೀರದಲೆಗಳಿಗೂ ನಿನ್ನದೇ ಖಯಾಲಿ, ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಸೋಕಿ ಮುದ್ದಿಸಿ ಮುಗುಳ್ನಗುತ್ತದೆ ..~ ಅಪ್ಪಿಬಿಡು ಒಮ್ಮೆ ಈ ಲೋಕವೇ ನನ್ನೊಳ ಮೂಡುವಂತೆ; ಪ್ರತಿ ಅಣುರೇಣು ಛಿದ್ರಗೊಂಡು ಬ್ರಹ್ಮಾಂಡ ಮರುಹುಟ್ಟು ಪಡೆವಂತೆ … …

Read More

ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ

ಕಳೆದ ಭಾನುವಾರದ [6/11/2016] ವಿಜಯ ಕರ್ನಾಟಕ – ಲವಲvk ಪುರವಣಿಯಲ್ಲಿ ಪ್ರಕಟವಾದ ನನ್ನದೊಂದು ಪದ್ಯ Leave a comment

Read More

ಹುಸೇನಿ ಪದ್ಯಗಳು – 39

೧) ಕಂಪ್ಪೌಂಡಾವೃತ ಬಹುಮಡಿಯ ಮನೆಯ ಅಲ್ಸೇಶನ್ ನಾಯಿಗೂ.. ಸಿಕ್ಕಿದ್ದನ್ನೆಲ್ಲ ತಿಂದು ರಾತ್ರಿಯೆಲ್ಲಾ ಊಳಿಡುವ ಬೀದಿನಾಯಿಗೂ ಇರುವ ವ್ಯತ್ಯಾಸ ಬರಿಯ ‘ಸ್ವಾತಂತ್ರ್ಯ’ ೨) ಸಮಯದ ವೇಗಕ್ಕೆ ಕುಪಿತನಾದವನು ಗಡಿಯಾರವನ್ನು ಹೊಡೆದು ಹಾಕಿದ; ಆದರೂ ಸಮಯ ನಿಲ್ಲಲಿಲ್ಲ …

Read More

ಸ್ವಗತಗಳ ಸಾಂತ್ವನ (ಹುಸೇನಿ ಪದ್ಯಗಳು – 39)

​ಹಸಿವಾಗಲು ಮಾತ್ರೆಯಿದೆ; ಕೇರಿಯ ಅನಾಥ ಹುಡುಗ ಕಾಯುತ್ತಿದ್ದಾನೆ, ಹಸಿವಾಗದಿರಲು ಔಷಧಿ ಬೇಕಂತೆ.. — ಅಲ್ಲಿ ಅವರು ಶಾಂತಿ ಸ್ಥಾಪನೆಗಾಗಿ ಯುದ್ಧ ನಿರತರಾಗಿದ್ದಾರೆ; — ಒಡೆದ ಗಾಜು ಮರು-ಜೋಡಿಸಲಾರದಂತೆ; ಮತ್ತೆ ಬದುಕು ? — ಎಲ್ಲವನ್ನೂ …

Read More

ಒಂದಷ್ಟು (ಅ)ಭಾವಗಳು -೧

1)ನೀ ಗಾಢ ಮೌನಕ್ಕೆ ಜಾರಿದಾಗೆಲ್ಲನನ್ನನ್ನು ಹಾಡುವಂತೆ ಭಾಸವಾಗುತ್ತದೆ;2)ಮನುಷ್ಯ ಕೋಟೆ ಕಟ್ಟಿ ಮುಂಬಾಗಿಲನ್ನೂ ಮುಚ್ಚಿ ನಿಶ್ಚಿಂತೆಯಿಂದಿದ್ದ,ಗೋಡೆ-ಬಾಗಿಲಿನ ಹಂಗಿಲ್ಲದ ಸಾವು ಮನುಷ್ಯನ ಸೋಲಾಗಿಯೇ ಉಳಿಯಿತು;3)ಅಬ್ಬರದ ಬೆಳಕಿನ ಹಿಂದೆಬಿದ್ದ ಜಗತ್ತು ಕತ್ತಲೆಗೂ ಬೆಳಕನ್ನು ತೊಡಿಸಿತು,ನಿನ್ನೊಳಗಿದ್ದ ಹಣತೆಯೊಂದು ಜಗದ ಕುಹುಕಕ್ಕಂಜಿ …

Read More