November 19, 2019

ಫಲ್ಗುಣಿಯ ಹನಿಗಳು -1

Nenapinasanchi
ಬಾಳೆಗಿಡದ ದಾರದಲ್ಲಿ
ಬಾಲ ಸಿಕ್ಕಿಸಿ ಆತ್ಮಹತ್ಯೆ
ಮಾಡಿಕೊಂಡ ಮುಗ್ಧ
ಮಲ್ಲಿಗೆಯ ಮೊಗ್ಗುಗಳು
ನಿನ್ನ ಮುಡಿಯಲ್ಲಿ ಮತ್ತೆ
ಜೀವ ಪಡೆದುಕೊಂಡಿವೆ.
~~~
ಊರ ಜಾತ್ರೆಗೆ
ತಳಿರು ತೋರಣ
ಮಿಣುಕು ದೀಪವೆಲ್ಲ
ಕಟ್ಟಿದಾಕ್ಷಣ ಮುಗಿದಿಲ್ಲ.
ಸಂಭ್ರಮ ಕಳೆಗಟ್ಟುವುದು
ನಿನ್ನ ಪ್ರವೇಶವಾದಾಗ.
~~~
ಜನರೆಲ್ಲ ಜಾತ್ರೆಗೆ ಮರುಳಾಗಿದ್ದಾರೆ
ತೇರು,ಮಳಿಗೆ,ಗುಡಿಯ ಮುಂದೆಲ್ಲ
ಸಂಭ್ರಮ ಹುಡುಕಾಡುತ್ತಿದ್ದಾರೆ.
ಜನಜಂಗುಳಿಯ ನಡುವೆ ನುಸುಳಿ
ನಿನ್ನ ಹುಡುಕಿ ನಗು ವಿನಿಮಯಿಸಿದ
ಸಂಭ್ರಮ ಹೇಳಿಕೊಡಬೇಡ ಅವರಿಗೆ.

One thought on “ಫಲ್ಗುಣಿಯ ಹನಿಗಳು -1

Leave a Reply