March 29, 2020

ಅವಳು …

ಚಿತ್ರ ಕೃಪೆ : ಹಾರಿಸ್ ಖಾನ್

೧.
ಬಹುಮಹಡಿ ಮನೆಯಲ್ಲಿ
ಕಾಲಿಗೊಂದು ಕಾಲಾಳು,
ಕೋಣೆಗೊಂದು ಸೀಸಿ ಕ್ಯಾಮರಾ
ಅವಳು ಬಿಕ್ಕುವುದು ಮಾತ್ರ
ಗೋಡೆಗಷ್ಟೇ ತಿಳಿಯುತ್ತದೆ.

೨.
ಸೂರ್ಯ ಸರಿದರೂ ಮನೆ ಮುಟ್ಟದ
ಮಗಳು;
ಜಾಗರಣದ ಜಗತ್ತಿನಲ್ಲಿ ಅವಳಿಗೆ
ಸೂರ್ಯನ ಮೇಲೆ ಮುನಿಸು.

೩.
ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;
ಉಸಿರು ನಿಲ್ಲಿಸಿ
ತೊಟ್ಟಿಲಿನ ಉಸಿರನ್ನು ಆಲಿಸಿ
ನಿಟ್ಟುಸಿರಿಟ್ಟಳು ಅವಳು …

7 thoughts on “ಅವಳು …

 1. ಗಂಡಿನ ನೋಟ
  ಹೆಣ್ಣು ತಲೆಕೂದಲು
  ಸರಿ ಪಡಿಸಿಕ್ಕೊಳ್ಳುವಂತಿರ ಬೇಕು
  ಸೆರಗು ಸರಿ
  ಮಾಡಿಕೊಳ್ಳುವ ಹಾಗಲ್ಲ.
  ಅದೇ ರೀತಿ
  ಹೆಣ್ಣಿನ ಅಲಂಕಾರ
  ಗಂಡು ಬೆಲೆ ಕೊಡುವ
  ಹಾಗೆ ಇರಬೇಕೇ
  ವಿನಃ ♂️ಬೆಲೆ ಕೇಳುವ ಹಾಗಲ್ಲ.

Leave a Reply