April 5, 2020

ಹುಸೇನಿ ಪದ್ಯಗಳು – 37

nenapinasanchi-manwoman

ಅಬ್ಬರದ ಭಾಷಣದಿಂದ
ದೇಶದ ದಿಶೆ ಬದಲಿಸಬಹುದು
ಹಸಿವಿಗೆ ಅನ್ನವೇ ಬೇಕು ..

ಅವನು ಮಸೀದಿಯೊಳಗೆ,
ಇವನು ಮಂದಿರದೊಳಗೆ,
ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ
ಬೇಡುತ್ತಲೇ ಇದ್ದರು..
— 
ಮಗ ಬೈಕಿನ ಮೊದಲನೇ
ರೈಡಿಗೆ ಕೂಗಿ ಕರೆಯುತ್ತಿದ್ದ;
ಅಪ್ಪ ಅದರ ಸಾಲದ ಮೊದಲಿನ
ಕಂತಿನ ಲೆಕ್ಕಾಚಾರದಲ್ಲಿ ಮೈಮರೆತಿದ್ದ;

ಮೊದಲ ರಾತ್ರಿಯ ಮರುದಿನ
ಈರುಳ್ಳಿಯ ಒಂದೊಂದೇ
ಸಿಪ್ಪೆ ತೆಗೆಯುತ್ತಿದ್ದ ಹುಡುಗಿ
ಒಳಗೊಳಗೇ ಲಜ್ಜೆಯಿಂದ ಕಂಪಿಸುತ್ತಿದ್ದಳು;

ಬಟ್ಟೆ ತೊಟ್ಟು ಸಭ್ಯ
ಎನಿಸಿಕೊಂಡ ಮನುಷ್ಯನ
ಪರಮಾನಂದಗಳು
ಬೆತ್ತಲೆ ದೇಹವನ್ನು ಬೇಡುತ್ತದೆ;
ಹುಸೇನಿ ~

Leave a comment

5 thoughts on “ಹುಸೇನಿ ಪದ್ಯಗಳು – 37

  1. ಬಾರದ ಪ್ರೀತಿಯ ಕಾಯುವೆ ಮಂಕೆ,
    ಕಾಡುವ ಪ್ರೀತಿಗೆ ಸಾಯ ಬೇಕೆ,
    ಪ್ರೀತಿಯ ನೆಪದಲಿ ಹೆತ್ತವರ ಮರೆಯುವೆ ಏಕೆ ಗೆಳೆಯಾ……….

  2. Hi sir , nim Preeti bagegina kavana nodudre nim mansali tumba preeti Eddu , age alli yarannu practically love madilla ansatte ? Or u lost ur girl ?
    Just

Leave a Reply