October 15, 2019

ಇಬ್ಬನಿ ಹಾಯ್ಕು -೧

ಇಂದಿನವರೆಗೂ
ನನಗೆ ತಪ್ಪಿದ ದಾರಿಗಳು
ನಿನ್ನೆಡೆಗಾಗಿತ್ತು
*
ಅನ್ನ ಸುತ್ತಿಟ್ಟ
ಎಲೆ ತೆರೆದಾಗ
ಅಮ್ಮನ ಪರಿಮಳ
*
ಮರಳುಗಾಳಿ
ಆಕಾಶ ನೀಲಿಮೆಯಲ್ಲಿ
ವಿಳಾಸ ಹುಡುಕುತಿದೆ
*
ನೆನಪಿನ
ಬೆರಳಚ್ಚುಗಳೊಂದಿಗೆ
ಮೂಲೆಯಲ್ಲಿ ಪುರಾತನ ಪಿಯಾನೊ
*
ಮೂಲೆಯಲ್ಲಿ ಅನಾಥ
ಚರಕ
ಗಾಂಧಿ ತಾತನ ನೆನಪು
( ಕೆಲವೊಂದು ಪ್ರೇರಿತ ಮತ್ತು ಅನುವಾದಿತ )
ಇಷ್ಟವಾದರೆ ಹೇಳಿ

0 thoughts on “ಇಬ್ಬನಿ ಹಾಯ್ಕು -೧

    1. 🙁 ಚರಕದ ಹಾಗೆ ಗಾಂಧಿ ತಾತನ ತತ್ವಾದರ್ಶಗಳೂ ಮೂಲೆಗುಂಪಾಗಿದ್ದು ನಮ್ಮ ದುರಂತ ಅಲ್ಲವೇ ಬದ್ರಿ ಅಣ್ಣ ?

Leave a Reply

Your email address will not be published. Required fields are marked *