November 15, 2019

ಹಂಗಿನ ಹನಿಗಳು

nenapina sanchi
1)
ನಿನ್ನ ಹಂಗಿಲ್ಲದೆ ಕವಿತೆಯೊಂದ
ಬರೆಯಬೇಕೆಂದು ಹೊರಟೆ;
ಕವಿತೆಗೊಂದು ಶೀರ್ಷಿಕೆಯೂ
ಬರೆಯಲಾಗದೆ
ಚಡಪಡಿಸುತ್ತಿದ್ದೇನೆ…

2)
ನಿನ್ನ ನೆನಪಿನ ಹಂಗಿಲ್ಲದೆ
ಒಂದು ಕವಿತೆಯನ್ನೂ ಕಟ್ಟಲಾಗದ
ನನ್ನ ಅಸಹಾಯಕತೆಗೆ
ಸಂತಸಪಡಲೋ …?
ಮರುಗಲೋ…?

3)
ನೀನಿರದ ರಾತ್ರಿಗಳಲ್ಲಿ
ನಕ್ಷತ್ರಗಳು ಕವಿತೆ ಹೇಳುತ್ತಿತ್ತು;
ನನ್ನ ಮುಖದಲ್ಲಿರುವ ನಿನ್ನ ಕಣ್ಣುಗಳು
ತುಂಬಿಕೊಂಡ ಆ ಚಂದಿರನ ಮುಖದಲ್ಲಿ
ಸೂತಕದ ಛಾಯೆ.

4)
ಎಲ್ಲವೂ ಸರ್ವನಾಶವಾದ
ನಂತರವೂ ಒಮ್ಮೆ
ನೆನಪಾಗು;
ಬದುಕು ಮುಂದುವರೆಯಬೇಕು..

ಇಷ್ಟವಾದರೆ ಹೇಳಿ

10 thoughts on “ಹಂಗಿನ ಹನಿಗಳು

  1. Hoothu Hodha nenapugalella..,yendhaadaromme hunnimege bhorgareva samudhradhanthe, antharaaladinda bharathodagidhaaga hrudhayakke bhalavaagi oddho..,illa..chumbhisiyo bharuvudhembhudhe nanna nambhike.illadhiddhalli nenapugalindha hrudhayakkekistu novu-nalivu…?

  2. ನಿಮ್ಮ ಕವಿತೆಗಳು ತುಂಬಾ ಚೆನ್ನಾಗಿವೆ. ನಿಮ್ಮ ಕವಿತ್ವ ಹೀಗೇ ಸಾಗಲಿ…

Leave a Reply

Your email address will not be published. Required fields are marked *