October 14, 2019

ಹುಸೇನಿ ಪದ್ಯಗಳು – 5

ಆ ನಿನ್ನ ಬಿಚ್ಚು
ನಗುವಿನ ಹಿಂದೆ
ಅದೆಷ್ಟು
ಬತ್ತದ ಕಣ್ಣೀರು!
———-
ಚದುರಿದ ಕನಸೊಂದಿಗೆ
ಜೀವಿಸುವುದಕ್ಕಿಂತ
ಒಳಿತು
ಮರೆಯದ ನೆನಪುಗಳೊಂದಿಗೆ
ಸಾಯುವುದು ಅಲ್ಲವೇ ?
——–
ದೂರದಲ್ಲೆಲ್ಲೋ
ಕಂಡ ಬೆಳಕನ್ನು
ನೀನು
ಬೆಂಬತ್ತಿದಾಗ
ನನ್ನೊಳಗೆ ಬರೀ
ಕತ್ತಲು…
———
ನೀನು ನಿನ್ನ
ಪ್ರೀತಿಯನ್ನೆಲ್ಲ
ಮಾತಲ್ಲೇ ತೋರಿಸಿದೆ
ನಾನು
ನನ್ನ
ಜೀವನದಲ್ಲೂ…!!


Leave a Comment

0 thoughts on “ಹುಸೇನಿ ಪದ್ಯಗಳು – 5

  1. ಭಾವ ತೀವ್ರತೆಯ ಮನೋಜ್ಞ ಕವಿತೆಗಳು.ಲೇಖನಿ ಸುರಿಸುವ ಭಾವಸ್ಪುರಣವು ಹಿತವಾದ ಅನುಭವ ನೀಡುವುದು.ಸುಂದರವಾಗಿವೆ ಗೆಳೆಯರೇ,ಮುಂದುವರೆಯಿರಿ.

Leave a Reply

Your email address will not be published. Required fields are marked *