December 5, 2019

ಮೌಢ್ಯದ ಮನೆ

ಉಂಡು ಬಿಟ್ಟ ಎಂಜಲೆಲೆಯ ಮೇಲೆ ಉರುಳಾಡಿ ಎದ್ದವನ ಮಾನವ ಪ್ರಜ್ಞೆಯ ಹೆಣ ಮೌಢ್ಯದ ಮಂಟಪದ ತೋರಣವಾಯಿತು; ಉಂಡ ಎಂಜಲೆಲೆ ಬಿಟ್ಟು ಎದ್ದವನ ಆತ್ಮಸಾಕ್ಷಿಯ ಹೆಣ ಅಲ್ಲೆಲ್ಲೋ ಬಿದ್ದಿರಬಹುದಾ ? ಹುಸೇನಿ ~

Read More

ಹುಸೇನಿ ಪದ್ಯಗಳು – 38

೧) ನಿನ್ನೆಲ್ಲಾ ನೆನಪ ಗುಡ್ಡ ಹಾಕಿ ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ ಹೊಗೆ ಶ್ವಾಸದಲ್ಲಿ ಲೀನವಾಯ್ತು, ನಾಳೆಯ ನನ್ನ ಉಸಿರಿಗೆ ನಿನ್ನ ಗಂಧವಿರಬಹುದಾ .. ? ೨) ನೀನಿಲ್ಲದೇ ಆ ತೀರ ಮೌನವಾಗಿತ್ತು. ಮರಳನ್ನು …

Read More

ನೆನಪಿನ ಸಂಚಿ – ಹತ್ತು ಲಕ್ಷ ದಾಟಿದ ಓದುಗರು !!

ಒಂದು ಖುಷಿಯ ವಿಚಾರ ನಿಮಗೆ ಹೇಳೋದೇ ಮರೆತು ಹೋಯ್ತು.. ಅದೇನೆಂದರೆ ನನ್ನ ಅಸಂಬದ್ಧ ಅಲಾಪಗಳ “ನೆನಪಿನ ಸಂಚಿ” ಬ್ಲಾಗ್ ಓದುಗರ ಸಂಖ್ಯೆ ಬರೋಬ್ಬರಿ 1 0 0 0 0 0 0 [ಹತ್ತು …

Read More

ಹುಸೇನಿ ಪದ್ಯಗಳು – 37

ಅಬ್ಬರದ ಭಾಷಣದಿಂದ ದೇಶದ ದಿಶೆ ಬದಲಿಸಬಹುದು ಹಸಿವಿಗೆ ಅನ್ನವೇ ಬೇಕು .. — ಅವನು ಮಸೀದಿಯೊಳಗೆ, ಇವನು ಮಂದಿರದೊಳಗೆ, ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ ಬೇಡುತ್ತಲೇ ಇದ್ದರು.. —  ಮಗ ಬೈಕಿನ ಮೊದಲನೇ ರೈಡಿಗೆ …

Read More

ಹುಸೇನಿ ಪದ್ಯಗಳು – 36

1) ಕಿವಿಗೊಟ್ಟೆಯಾ…? ಆ ಕಾನನದಿ ಮುದಿ ಮರದ ಕೊನೆಯ ತರಗೆಲೆ ಉದುರಿದ ಶಬ್ದ.. ಕಿವಿಗೊಟ್ಟೆಯಾ…? ನನ್ನ ಎದೆ ಬಿರಿದ ಶಬ್ದ.. 2) ಅಬ್ಬಾ ! ಇನ್ನೆಷ್ಟು ಮಾತನಾಡಲಿ, ಒಳಗುದಿ ನೀ ತಿಳಿಯಲೇ ಇಲ್ಲ, ಇನ್ನು …

Read More

ನಿಯ್ಯತ್ತಿನ ಕರೆಗಳು (ಹುಸೇನಿ ಪದ್ಯಗಳು – 35)

ನಿಯ್ಯತ್ತು ಸುತ್ತಿಕೊಂಡಿದೆ, ಉಸಿರಿಗೊಂದಿಷ್ಟು ಗಾಳಿ ಕೊಡಿ ~ ನಿಯ್ಯತ್ತು ಅಂದರೆ ಪಾದ ಮತ್ತು ಚಪ್ಪಲಿ; ಅಷ್ಟೂ ಸನಿಹವಿರುವ ಸಾವು.. ~ ನಿಯ್ಯತ್ತು ಎಂದರೆ ನಡೆದ ಕಾಲುದಾರಿ ನಡುವೆ ತೊಟ್ಟಿಕ್ಕಿದ ನೆತ್ತರು, ಮತ್ತದರ ಕಮಟು .. …

Read More

ಈ ಕಪ್ಪಿಟ್ಟ ವಿಶಾಲ ಬಾನು.. (ಹುಸೇನಿ ಪದ್ಯಗಳು – 34)

1) ಈ ಕಪ್ಪಿಟ್ಟ ವಿಶಾಲ ಬಾನು ಅಲ್ಲಲ್ಲಿ ಹೊಳೆಯುವ ಒಂದೆರಡು ಚುಕ್ಕಿಗಳು, ನೀನು; ಮತ್ತು ಹುಡುಗ ಬುದ್ದಿಯ ನಾನು; ರಾತ್ರಿ ಮುಗಿಯದ ಆಟಕ್ಕೆ ಬೇಕಿನ್ನೇನು?! 2) ಎಲ್ಲವೂ ಸುಳ್ಳು; ಈ ಭೂಮಿ ಈ ಬಾನು …

Read More

ಹುಸೇನಿ ಪದ್ಯಗಳು – 33

೧) ಈಗೀಗ ನಿನ್ನ ನೆನಪುಗಳು ದೀರ್ಘ ನಿಟ್ಟುಸಿರು ಮತ್ತು ಕಣ್ಣಂಚಲಿ ಮೂಡುವ ಹನಿಗಳು; ಅಷ್ಟೇ.. ೨) ನೀನು ಹೊರಟು ಆ ತಿರುವಿನಂಚಿನಿಂದ ಮತ್ತೆ ತಿರುಗಿ ನೋಡಬಾರದಿತ್ತು; ನನ್ನ ವಾಸ್ತವ ಮತ್ತು ಭವಿಷ್ಯ ಎರಡೂ ಗೋಜಲು …

Read More

ಮೌನದ ಹಾಡು …

ಮಾತಾಗುತ್ತಾಳೆ, ಮಾತಿನಲ್ಲೇ ಮೌನದ ಹಾಡೊಂದು ಗುನುಗುತ್ತದೆ, ತಡೆಯುತ್ತಾಳೆ, ಬಲವಂತವಾಗಿ ಅಥವಾ, …… ಮಣ್ಣು ಬೀಜದ ಕತೆಗೆ ಕೊಪಗೊಳ್ಳುತ್ತಾಳೆ, ಸೃಷ್ಟಿ ಹಾಡು ಕರ್ಕಶವಂತೆ! ಪದಗಳಲಿ ಒಳಗುದಿಗಳನೆಲ್ಲ ಬಗೆದು ಬಗೆದು ಬೆತ್ತಲಾಗಿದ್ದು ನಿಜವೇ ಸರಿ. ಕತ್ತಲಲ್ಲಿ ಬೆತ್ತಲಾಗೋದು …

Read More

ಅನುಸಂಧಾನ (ಹುಸೇನಿ ಪದ್ಯಗಳು – 32)

ಅನುಸಂಧಾನ -2 ನನ್ನ ಮೌನಗಳ ತುದಿಗೆ ಬೆರಗು ಮೂಡಿ ಮಾತು ಕಲಿತಿವೆ . ಎಷ್ಟೋಂದು ಕಟ್ಟಿಟ್ಟ ಮಾತುಗಳು ಹಾಗೇ ಉಳಿದಿವೆ . ನಾಳೆಗಿಷ್ಟು ಬಿಚ್ಚಿಡುವ ಮಲಗು ಮಾತು ಮಾತಾಡಲಿ ಮೌನಗಳೊಂದಿಗೆ.. ಅನುಸಂಧಾನ-1 ನಿನ್ನ ಮುಗಿಯದ …

Read More