December 30, 2019

ಅನುಸಂಧಾನ (ಹುಸೇನಿ ಪದ್ಯಗಳು – 32)

ಅನುಸಂಧಾನ -2
ನನ್ನ ಮೌನಗಳ ತುದಿಗೆ
ಬೆರಗು ಮೂಡಿ ಮಾತು ಕಲಿತಿವೆ .
ಎಷ್ಟೋಂದು ಕಟ್ಟಿಟ್ಟ ಮಾತುಗಳು
ಹಾಗೇ ಉಳಿದಿವೆ .
ನಾಳೆಗಿಷ್ಟು ಬಿಚ್ಚಿಡುವ
ಮಲಗು
ಮಾತು ಮಾತಾಡಲಿ ಮೌನಗಳೊಂದಿಗೆ..
ಅನುಸಂಧಾನ-1
ನಿನ್ನ ಮುಗಿಯದ ಮಾತಿನ ತುದಿಯ
ಮೌನದೊಳಗಿಂದ
ಕವಿತೆಯೊಂದು ಇಣುಕುತ್ತಿತ್ತು;
ಅದ ನೋಡಿದ ನನ್ನ ಸಮಸ್ತ ಕವಿತೆಗಳು
ಅಪಮಾನ ತಾಳಲಾರದೆ
ಅಸುನೀಗಿದವು …
Leave a comment

8 thoughts on “ಅನುಸಂಧಾನ (ಹುಸೇನಿ ಪದ್ಯಗಳು – 32)

  1. ಕನ್ನಡ ಬ್ಲಾಗರ್ಸ್ ಎಲ್ಲರನ್ನು ಒಟ್ಟಿಗೆ ಭೇಟಿ ಮಾಡಿಸಬೇಕೆಂಬ ಒಂದು ಸಣ್ಣ ಪ್ರಯತ್ನ ನನ್ನದು.
    Weekend ಅಲ್ಲಿ ಒಂದೆರಡು ತಾಸು ನಾವೆಲ್ಲರೂ ಒಟ್ಟಿಗೆ ಕೂತು ಪರಸ್ಪರ ಕವನ ವಾಚನ ಮಾಡಬೇಕೆಂಬ ಸಣ್ಣ ಆಸೆ.
    ಅದಕ್ಕಾಗಿ ಒಂದು wats app group create ಮಾಡಿ ಎಲ್ಲರು ಅನುಕೂಲವಾಗುವಂತೆ ಒಂದು ಅವಧಿ ನಿಗದಿಪಡಿಸಿಬೇಕಿದೆ.
    ನಿಮಗೂ ಈ ಪ್ರಯತ್ನ ಇಷ್ಟವಾದರೆ, ನಿಮ್ಮ ನಂಬರ್ ತಿಳಿಸಿ !

  2. ನಿಮ್ಮ ಸಾಲುಗಳಿಗೆ ನನ್ನ ಕೆಲ ಪದಗಳ ಸ್ಪರ್ಷ..
    ಬೇಸರವೆನಿಸಿದರೆ ಒಂದು ಕ್ಷಮೆಯಿರಲಿ..
    ಮೌನ ಮಾತು ಕಲಿತಿದೆ…
    ನನ್ನ ಮಾತುಗಳ ಮೌನದ ಆದಿಗೆ..
    ಬೆರಗು ಮೂಡಿ ಮಾತೂ ಮೂಲೆ ಸೇರಿದೆ..
    ಮೌನವೂ ಮಾತು ಕಲಿತಿದೆ…
    ಎಷ್ಟೊಂದು ಕಟ್ಟಿಟ್ಟ ಮಾತುಗಳು ಹಾಗೇ ಉಳಿದಿವೆ
    ಮೌನವೇ…. ದೂರ ಹೋಗೆಂದು ಅಂಗಲಾಚಿ ಬೇಡಿದೆ..
    ಹುಂ..
    ನೀ ಮೆರೆದದ್ದು ಸಾಕು ಮೂಲೆ ಸೇರು ಓ ಮಾತೆ..
    ನಾ ಬಂದಾಯ್ತು ಇನ್ನು ನಿನ್ನ ಇರುವಿಗೆ…
    ಮೌನವೂ ಮಾತು ಕಲಿತಿದೆ..
    ಇನ್ನಾದರೂ ಮಾತು ಮಾತಾಡಲಿ ಬರೀ ಮೌನಗಳೊಂದಿಗೆ..???

Leave a Reply