ನೆನಪಿನ ನಾವೆಯ ನಾವಿಕ
ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬೆರೆಯುವ ವೇಳೆ 'ಈ ಕ್ಷಣ' ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..
ನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. "ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ", ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..
ನಿಮ್ಮನೆ ಹುಡುಗ,
ಹುಸೇನಿ ~
ನೆನಪಿನ ಸಂಚಿಯ ಕುರಿತಾದ ನಿಮ್ಮ ಅಭಿಪ್ರಾಯವನ್ನು ಕಳುಹಿಸಿ : nenapinasanchi@gmail.com
nem kavana chanagedi but neu yaruooooooooo enu antha gothila nem parechaya
madekode okkkkkkkkkkkkkkkkkkkkkk
Dhanyavaadagalu Hema … Nanna kiru parichaya blogalle ide nodi.. 🙂
Super Sir. Realy excellent words sir. Sir please give me your Number sir.
Thanks Ravinandana.. 🙂 U cam meet me on Facebook (Click here)
🙁
Yaakavvi bejaaraagidya..?
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ.. ಸೂಪರ್.. ಚಂದದ ಕವನಕ್ಕೆ ಅಂದದ ಚಿತ್ರ
ಧನ್ಯವಾದಗಳು ಶ್ರೀಕಾಂತಣ್ಣ .. ಕಣ್ಣಂಚಿನ ಈ ಮಾತಲ್ಲಿ ಕಳೆದು ಹೋದ ಪ್ರೀತಿಯಲ್ಲದೇ ಮತ್ತೇನೂ ಇಲ್ಲ ..
Waaa Supper guru…..
Kannachina ee matalli kaledu hoda preetiyallade mattenu illa.. Excellent sentence
ulidiralu neenu nanna manadalli, kande ninna nanu nanna pallakki yalli, bareditte ninnade chittara nanna kannalli, hudukadutta hode nanu ninna ellelli, ulidiruva matu ulietu nannalli, konege arivaitu idu agiddu kanasalli,, kai ittu nodidaga neenu nanna <3 edegudalli.
ವಾವ್ .. ಎದೆಗೂಡಲ್ಲಿ ತುಂಬಿದವಳ ಕನಸಲ್ಲೂ ಕಾಣುವುದು ಸಹಜ 🙂 ಪ್ರೀತಿಯ ಪರಾಕಾಷ್ಠೆಯ ಸಾಲುಗಳು ..
Thumba chennagide…. i liked it!!!!
Danyvaadagalu Sonu…
what a beautiful letter
Hmm………..chennagidhe.
HELLO TUMBA CHENNAGIDE, PREETHI AMBUDU ALLI YAVAGA YARAMELE.HUTTUTTE ANTA YARIGE GOTAGALA YAKENDRE PREETHI HELIKELI BARODILA …
hi really good .i like your Nenapina Sanchi ……………..
Nice
few lines bt with a large meaning..wov
Thumbha mudhakodtve.ella barahagalu.ondu nodha manassu,evattina tolalatada jivanadalliaguvbesardha a kshanagali e ella ani muttu,obba snehitha koduva samadhanadha matagalu or obba thayi maganige niduva samadhanadha mathagalu yava riti eruttaveyo a ritiya samadhana e kavanagalinda adu sigutte.so nimge nahu yavaglu chiraruni.anna.
Avyaktha bhavanegala avarnaniya horata e jeevana……. Prathi kshana kshanadha anubhavadallu yeno hosathanavide……… Arithukondava kavi agthananthe…….. adhu nija ansthu nim barahagalannu nodi
ಅವ್ಯಕ್ತ ಭಾವಸಾಂದ್ರತೆ ಈ ಜೀವನ ! ತುಂಬಾ ಆಪ್ತ ಸಾಲು .. ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ
Yakri nan abhiprayana e tara thegdhhakbitidira
nee adbutha kanayya !
Super
ಪ್ರೀತಿಲಿ ಮೋಸ ಆಗಿದ್ಯಾ? ಪ್ರೀತಿಸಿದವರು ಅಗಲಿದ್ದಾರಾ?
HEART TOUCHING LINES
superb. pl. continue in writing kannada kavanas
hai.. Husain…. u r jus amazing dude…. keep it up
chanagidhe .adre ega namge bekagirodu bavukathe alla ,prastutateya anavarana annoadu nanana abipraya
chanagide
Tumbaa chennagide annayya 🙂
Tumbu manada dhanyavaaagalu… sanchige nimage suswagatha 🙂 baruttiri.. 🙂
super sir niva bareyo yella kavanadallu bhavanegala jeevala yedda kanatide so nice sir
SUPER YAR,,,,,,,,,,,,,
tumba chanagide kanri………………….:)
bhavanegala lahari thumbha channagide ri….
ಧನ್ಯವಾದಗಳು ವಸಂತ್ …
VERY NICE
Thank you so much Anitha
prithiyalli sotharenanthe…..badukina daari thumba udaha vide,
avala nenapugalu hosa kavanagalagi horahomi,
Sothavarige jiva nidide……nodova nota badalagi,
jivana sadrudavagide…adaru nina nenapugalu,
agaga nana kadothiralu….kannachalli niru…
thttiannachali sannadagi nagu modide…..
prithi inda,
vinay
Superb sir…….. I like it Kavite bareyodu estu mukyano adna muchkondu irde expression mode hudkodu bahala mukya avagle kavitegondu bele barodu
plesent
super sir nimma e kavitegalannu odatidre nanna manasige tumba hita aagatte e jagattalli nondirorage yaru illa anakotivi adu sullu nanna manasige nimma kavanagalu tumba santosha kodotte. i like you sir,
ಬರಹಗಳ ಶಕ್ತಿಯೇ ಅಂಥದ್ದು .. ಕಾರಿರುಳ ಹಾದಿಯಲ್ಲೂ ಹೊಂಬೆಳಕ ಚೆಲ್ಲಿ, ಕೈ ಹಿಡಿದು ನಡೆಸುತ್ತವೆ ಅಕ್ಷರಗಳು …
sakkattagide……….
super nonda manasige nijavada mattu sir
ನೊಂದ ಮನಸ್ಸಿಗೆ ಸಾಂತ್ವನವಾದರೆ ನನ್ನ ಅಕ್ಷರಗಳು ಸಾರ್ಥಕ ಪಡೆದುಕೊಂಡವು ..
Nice
ITS REALLY NICE ONE AN MAKING ME TO FEELTHE LAYER OF LIFE. I AM THANK FULL TO YOU.
Thank you very much Regan
channagide
thank you Sir thumba channagide
Superb!! impressive writing, geleya!
Maleya hani nintharu
Marada hani nilala
nee nanna maretharu
Na ninna mareyala nice day
Nanu ivagle nodidu chanagide…..super….
Super
ನನ್ನೀ ಹೃದಯ ಚಲಿಸುತ್ತಿದ್ದರಿಂದಲೋ ಏನೋ …ಬದಲಾಗಿ *ನನ್ನೀ ಹೃದಯ ಬೆಳಗುತ್ತಿದ್ದರಿಂದಲೋ ಏನೋ* ಅಂದ್ರೆ ಚೆನ್ನಾಗಿತ್ತು ಅನ್ನಿಸುತ್ತೆ…don’t mind .plz…….just i share my thought…………..ನಿಮ್ಮ ಬರವಣಿಗೆಗಳಿಗೆ ಧನ್ಯವಾದಗಳು ಸರ್….
🙂 thanks for your insight ..
ಸೊಗಸಾದ ಬರಹ.. Visiting ur blog 1st time, liked it.
Thank you and Welcome 🙂
ಸೊಗಸಾದ ಬರಹ.. Visiting ur blog 1st time, liked it.
nimma barah yeno manassige ondu tara bhara mattu hagura madutte kela kshna kanniru barutte adella yeno namma jote nadeda ghatanegala tara…..
manassige tumba khushi nu agutte nanu ide modalu sari nimma blog nod de inmele dina odtini.
Thank you very much for making every heart to live happy…..
VERY VERY INTERESTING YOUR NOVELS.. MAY BE U R A LOVE DISAPPOINTED PERSON.. NANGU KAVITE BARIYOKE BARUTTE RAJYA MATTAKKU NANNA KAVANA SELLECT AGIDAVU.. BUT MUNDE HEGE E FILD NALLI BELILI ANT GOTTAGADE SUMNE IDINI SIR.. NIM JOTHE CONTACT ITKONDRE YENADRU SAHAYA AGBAHUDA SIR…….????
Hello Brother Nanu Jeevandalli Tumba Nondidini Please manasu Hagura aglike 1 salu Heli
Yellarnu Preetiinda Nodo Nange ega onti tana Kadtide yakandre naniga onti Jeeva