November 22, 2019

ಹುಸೇನಿ ಪದ್ಯಗಳು – 13

Roses-for-a-lost-love-a29108270

೧.
ನೆನಪಿನ ಪುಟಗಳಲ್ಲಿ ಅಡರಿ ಬಿದ್ದ
ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ
ನಿನ್ನ ರೂಪವಿತ್ತು..
ಇಂದು ನನ್ನ ವಿರಹಕ್ಕೂ…!
೨.
ದುಃಖ ಸತ್ಯಗಳು
ನನ್ನ ನೋಡಿ
ನಗುತಿದೆ;
ದುಃಖ ಮರೆಯಲು
ನಾನೂ..! 
೩.
‘ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?’
ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ.
‘ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!’
ಉತ್ತರಿಸಿತು ಕಣ್ಣು.
೪.
ಎಲೆಗಳು ಪರಸ್ಪರ ತಾಕದಿರಲು
ದೂರ ದೂರದಲಿ ನೆಟ್ಟ
ಮರದ ಬೇರುಗಳು
ಭೂಗರ್ಭದಲಿ ಬಿಗಿದಪ್ಪಿದವು..!


ಹೇಗಿದೆ ಹೇಳಿ

4 thoughts on “ಹುಸೇನಿ ಪದ್ಯಗಳು – 13

  1. ಪ್ರತಿಯೊಂದು ಹನಿಗಳೂ ಕಾಡುತ್ತವೆ ಹುಸ್ಸೈನಣ್ಣ. ನಿಮ್ಮೊಳಗಿನ ಕವಿಮನದ ಕ್ರಿಯಾಶೀಲತೆಯ ತೂಕಕ್ಕೆ ತೂಗುವ ಹನಿಗಳಿವು.
    ಎಲೆಗಳು ಪರಸ್ಪರ ತಾಕದಿರಲು
    ದೂರ ದೂರದಲಿ ನೆಟ್ಟ
    ಮರದ ಬೇರುಗಳು
    ಭೂಗರ್ಭದಲಿ ಬಿಗಿದಪ್ಪಿದವು..!
    ಈ ಹನಿ ಬಹಳ ಇಷ್ಟವಾಯ್ತು.

  2. ಪ್ರತಿಯೊಂದು ಹನಿಗಳೂ ಕಾಡುತ್ತವೆ ಹುಸ್ಸೈನಣ್ಣ. ನಿಮ್ಮೊಳಗಿನ ಕವಿಮನದ ಕ್ರಿಯಾಶೀಲತೆಯ ತೂಕಕ್ಕೆ ತೂಗುವ ಹನಿಗಳಿವು.
    ಎಲೆಗಳು ಪರಸ್ಪರ ತಾಕದಿರಲು
    ದೂರ ದೂರದಲಿ ನೆಟ್ಟ
    ಮರದ ಬೇರುಗಳು
    ಭೂಗರ್ಭದಲಿ ಬಿಗಿದಪ್ಪಿದವು..!
    ಈ ಹನಿ ಬಹಳ ಇಷ್ಟವಾಯ್ತು.

Leave a Reply