December 8, 2019

ಹುಸೇನಿ ಪದ್ಯಗಳು – 3

ದೂರದಲ್ಲಿ ಅದೆಲ್ಲೋ
ನೀನು ಕಣ್ಣಿಗೆ ಕಾಡಿಗೆ
ತೀಡಿರಬೇಕು …
ಇಲ್ಲಿ ಆಗಸದ
ತುಂಬೆಲ್ಲ
ಕಾರ್ಮೋಡ….**********
ಎಲ್ಲೆಲ್ಲೋ
ಹುಡುಕಿದೆ
ನಿನ್ನ ..
ನೀನು ಮಹಾ ಕಳ್ಳಿ,
ಈ ಕವಿತೆಯಲ್ಲೆ
ಅಡಗಿದಿಯಲ್ಲೇ..?
**********
ಅಬ್ಬಾ…
ಹೊರಗಡೆ
ಚುಮು ಚುಮು ಚಳಿ..
ನಾ ನಿನ್ನ
ನೆನಪ ಹೊದ್ದು
ಬೆಚ್ಚಗೆ ಮಲಗಿದೆ..
**********
ಇಂದು ನನ್ನ ಮೇಲೆ
ನೀನಿತ್ತ
ಗುಲಾಬಿ
ಮಾತ್ರ ಸಾಕು
ನಾನು
ಪುನರ್ಜನ್ಮಿಸಲು….


Leave a Comment

15 thoughts on “ಹುಸೇನಿ ಪದ್ಯಗಳು – 3

  1. ನೆನಪುಗಳು ಅರ್ಥ ಗರ್ಬಿತ ಪದಗಳಾದವು………………………
    ನೀನು ಜೊತೆಗಿದ್ದಿದ್ದರೆ.. ಈ ಜೀವದ ಜೀವನಕ್ಕೆ ಅರ್ಥ ಬರುತ್ತಿತ್ತು..
    —————————————————————–
    ನಿಮ್ಮ ಸಾಲುಗಳಿಗೆ ನನ್ನ ವಂದನೆಗಳು //////////////////////////…!
    ಚೇತನ ಕದಂಬ

  2. ನೆನಪುಗಳು ಅರ್ಥ ಗರ್ಬಿತ ಪದಗಳಾದವು………………………
    ನೀನು ಜೊತೆಗಿದ್ದಿದ್ದರೆ.. ಈ ಜೀವದ ಜೀವನಕ್ಕೆ ಅರ್ಥ ಬರುತ್ತಿತ್ತು..
    —————————————————————–
    ನಿಮ್ಮ ಸಾಲುಗಳಿಗೆ ನನ್ನ ವಂದನೆಗಳು //////////////////////////…!
    ಚೇತನ ಕದಂಬ

Leave a Reply